All the city colleges Principals, please see that your college keep open today (13-05-2020). ADC Madam will visit your college. This is very urgent.
ಎಲ್ಲಾ ಪ್ರಾಚಾರ್ಯರ ಗಮನಕ್ಕೆ,
ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ ಫೆಬ್ರವರಿ 2020 ರಲ್ಲಿ ನಡೆದ, 2019-20ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ: 05-05-2020 ರಂದು ಪೂರ್ವಾಹ್ನ 9:00 ಗಂಟೆಗೆ ಸುವಿದ್ಯಾ ವೆಬ್ ಸೈಟ್ ಮುಖಾಂತರ ಪ್ರಕಟಿಸಲಾಗುವುದು. ಹಾಗೂ ಫಲಿತಾಂಶವನ್ನು ಈಗಾಗಲೇ ಸುವಿದ್ಯಾ ತಂತ್ರಾಂಶದಲ್ಲಿ ನಮೂದಿತವಾಗಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳಿಗೆ (ರಿಜಿಸ್ಟರ್ಡ್ ಸ್ಟುಡೆಂಟ್ ಮೊಬೈಲ್ ನಂಬರ್ಗಳಿಗೆ) ಎಸ್.ಎಂ.ಎಸ್ ಸಂದೇಶದ ಮುಖಾಂತರ ಅದೇ ದಿನದಂದು ರವಾನಿಸಲಾಗುವುದು.
ಅಂತರ್ಜಾಲ ಸೌಲಭ್ಯವಿರುವ ಎಲ್ಲ ಮೊಬೈಲ್ ಫೋನ್ ಗಳು / ಕಂಪ್ಯೂಟರ್ ಗಳಲ್ಲಿ, ಕೆಳಗೆ ಒದಗಿಸಿರುವ ಫಲಿತಾಂಶದ ಲಿಂಕ್ ಗೆ ಹೋಗಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ಪಡೆಯಬಹುದು ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮುದ್ರಿಸಿಕೊಳ್ಳಬಹುದು.
ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿಯೇ ಪೂರಕ ಪರೀಕ್ಷೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ತಿಳಿಸಲಾಗುವುದು
ವಿಶೇಷ ಸೂಚನೆ:
- ವಿಧ್ಯಾರ್ಥಿಗಳು ಫಲಿತಾಂಶ ಪರಿಶೀಲನೆಗಾಗಿ ಕಾಲೇಜಿಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ
- ಕಾಲೇಜಿನ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಸೂಚನಾ ಫಲಕದಲ್ಲಿ ಪ್ರಕಟಿಸಬಾರದೆಂದು ಸೂಚಿಸಲಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಕೊಂಡಿ (ಲಿಂಕ್)
https://result.dkpucpa.com
ದಿನಾಂಕ ಮತ್ತು ಸಮಯ
05-05-2020, ಪೂರ್ವಾಹ್ನ 9:00 ಗಂಟೆ
ಸಹಿ/-
ಉಪ ನಿರ್ದೇಶಕರು,
ಪದವಿ ಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ,
ರಥಬೀದಿ, ಮಂಗಳೂರು